ಭಾರತೀಯ ಸೇನೆ SSC Tech Men Recruitment 2026 – 350 ಹುದ್ದೆಗಳು

ಭಾರತೀಯ ಸೇನೆಗೆ ಅಧಿಕಾರಿಯಾಗಿ ಸೇರ್ಪಡೆಯಾಗಬೇಕು ಎನ್ನುವ ಕನಸು ಬಹಳಷ್ಟು ಯುವಕರಲ್ಲಿ ಇರುತ್ತದೆ. ವಿಶೇಷವಾಗಿ ಎಂಜಿನಿಯರಿಂಗ್ ಓದುತ್ತಿರುವವರು ಅಥವಾ ಪದವಿ ಮುಗಿಸಿರುವವರಿಗೆ “ಟೆಕ್ನಿಕಲ್ ಎಂಟ್ರಿ” ಮೂಲಕ ಸೇನೆಗೆ ಹೋಗುವ ಅವಕಾಶ ಬಹಳ ದೊಡ್ಡದು. ಅಂಥವರಿಗಾಗಿ ಇದೀಗ Indian Army ಒಂದು ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದು, SSC Technical 67th Men Course 2026 ಅಡಿಯಲ್ಲಿ 350 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೇನೆಯಲ್ಲಿನ Short Service Commission (SSC) ಮೂಲಕ ಅಧಿಕಾರಿಯಾಗಿ ಸೇವೆ ಮಾಡುವ ಅವಕಾಶ ಸಿಗಲಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಹತೆ, ವಯಸ್ಸಿನ ಮಿತಿ, ವೇತನ, ಆಯ್ಕೆ ವಿಧಾನ ಹಾಗೂ ತರಬೇತಿ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸರಳವಾಗಿ ವಿವರಿಸಲಾಗಿದೆ.

ನೇಮಕಾತಿಯ ಸಂಕ್ಷಿಪ್ತ ಮಾಹಿತಿ

ಈ ನೇಮಕಾತಿ ಸಂಬಂಧಿಸಿದ ಮುಖ್ಯ ಮಾಹಿತಿಯನ್ನು ನೋಡಿದರೆ:

  • ನೇಮಕಾತಿ ಸಂಸ್ಥೆ: ಭಾರತೀಯ ಸೇನೆ (Indian Army)
  • ಹುದ್ದೆಯ ಹೆಸರು: Short Service Commission (Technical) – 67th Course (Men)
  • ಒಟ್ಟು ಹುದ್ದೆಗಳು: 350
  • ಅರ್ಜಿ ವಿಧಾನ: ಆನ್‌ಲೈನ್ (joinindianarmy.nic.in)
  • ಅರ್ಜಿ ಆರಂಭ: 07 ಜನವರಿ 2026
  • ಅರ್ಜಿ ಕೊನೆ ದಿನಾಂಕ: 05 ಫೆಬ್ರವರಿ 2026
  • ಅರ್ಹತೆ: B.E / B.Tech (ಅಧಿಸೂಚಿತ Engineering streams)
  • ವಯೋಮಿತಿ: 20 ರಿಂದ 27 ವರ್ಷ
  • ಆರಂಭಿಕ ವೇತನ (Training ಸಮಯದಲ್ಲೇ): ₹56,100 ಪ್ರತಿ ತಿಂಗಳು

ಹುದ್ದೆಗಳ ವಿವರ (Stream-wise Vacancy)

ಈ 350 ಹುದ್ದೆಗಳನ್ನು ಎಂಜಿನಿಯರಿಂಗ್ ವಿಭಾಗದ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ ಹುದ್ದೆಗಳ ಸಂಖ್ಯೆ ಹೀಗಿದೆ:

  1. ಸಿವಿಲ್ ಎಂಜಿನಿಯರಿಂಗ್ ವಿಭಾಗ – 75 ಹುದ್ದೆಗಳು
    ಇದರಲ್ಲಿ Civil Engineering, Architecture ಮತ್ತು Building Construction ಸಂಬಂಧಿಸಿದ stream ಗಳಿಗೆ ಅವಕಾಶ ನೀಡಲಾಗಿದೆ.
  2. ಕಂಪ್ಯೂಟರ್ ಸೈನ್ಸ್ ವಿಭಾಗ – 60 ಹುದ್ದೆಗಳು
    Computer Science & Engineering, IT, Computer Technology, M.Sc Computer Science ಮುಂತಾದ stream ಗಳಿಗೆ ಸೇರಿದೆ.
  3. ಎಲೆಕ್ಟ್ರಿಕಲ್ ವಿಭಾಗ – 33 ಹುದ್ದೆಗಳು
    Electrical Engineering, Electrical and Electronics stream ಗಳಿಗೆ ಅವಕಾಶ.
  4. ಎಲೆಕ್ಟ್ರಾನಿಕ್ಸ್ ವಿಭಾಗ – 64 ಹುದ್ದೆಗಳು
    Electronics & Communication, Instrumentation, Telecommunication, Satellite communication ಮುಂತಾದ stream ಗಳಿಗೂ ಅವಕಾಶ.
  5. ಮೆಕ್ಯಾನಿಕಲ್ ವಿಭಾಗ – 101 ಹುದ್ದೆಗಳು
    Mechanical Engineering, Production, Automobile, Aeronautical/Aerospace/Avionics stream ಗಳಿಗೂ ಅವಕಾಶ.
  6. ಇತರೆ (Miscellaneous) ವಿಭಾಗ – 17 ಹುದ್ದೆಗಳು
    Chemical, Biomedical, Food Tech, Agriculture, Metallurgy, Mining, Nuclear Technology, Textile ಮುಂತಾದವು.

ಒಟ್ಟು ಹುದ್ದೆಗಳ ಸಂಖ್ಯೆ 350. ಇವು ತಾತ್ಕಾಲಿಕ ಹುದ್ದೆಗಳ ಸಂಖ್ಯೆ ಆಗಿದ್ದು, ಸೇನೆಯ ಅಗತ್ಯತೆಯ ಪ್ರಕಾರ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ.

ಅರ್ಹತಾ ಮಾನದಂಡ (Eligibility)

ಶಿಕ್ಷಣ ಅರ್ಹತೆ

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ B.E ಅಥವಾ B.Tech ಪದವಿ ಪಡೆದಿರಬೇಕು. ಸೇನೆಯು ಅಧಿಸೂಚನೆಯಲ್ಲಿ ಸೂಚಿಸಿದ stream ಗಳಿಗೆ ಮಾತ್ರ ಅರ್ಜಿ ಸ್ವೀಕರಿಸುತ್ತದೆ.

ಈ ಕೋರ್ಸ್‌ಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗಿದೆ. ಆದರೆ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆ ಆದರೆ, ಕೆಳಗಿನ ನಿಯಮವನ್ನು ತಪ್ಪದೇ ಪಾಲಿಸಬೇಕು:

  • 01 ಅಕ್ಟೋಬರ್ 2026ರ ಒಳಗೆ ಪದವಿ ಪಾಸಾದ ಪ್ರಮಾಣ ಪತ್ರ ಮತ್ತು ಎಲ್ಲಾ ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್ ಸಲ್ಲಿಸಬೇಕು
  • ತರಬೇತಿ ಆರಂಭವಾದ ನಂತರ 12 ವಾರಗಳ ಒಳಗೆ Degree Certificate ನೀಡಬೇಕು

ಮುಖ್ಯ ಸೂಚನೆ: ವಿದೇಶಿ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಅಭ್ಯರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅನುಮತಿ ಇರುವುದಿಲ್ಲ.

ರಾಷ್ಟ್ರೀಯತೆ

ಅಭ್ಯರ್ಥಿಯು ಕೆಳಗಿನವರಲ್ಲಿ ಒಬ್ಬರಾಗಿರಬೇಕು:

  • ಭಾರತದ ನಾಗರಿಕ
  • ನೇಪಾಳದ ನಾಗರಿಕ
  • ಅಥವಾ ಭಾರತದಲ್ಲಿ ಶಾಶ್ವತವಾಗಿ ನೆಲಸುವ ಉದ್ದೇಶದಿಂದ ಪಾಕಿಸ್ತಾನ/ಬರ್ಮಾ/ಶ್ರೀಲಂಕಾ/ಪೂರ್ವ ಆಫ್ರಿಕಾ ದೇಶಗಳಿಂದ ಬಂದ ಭಾರತೀಯ ಮೂಲದ ವ್ಯಕ್ತಿ (Eligibility certificate ಬೇಕಾಗುತ್ತದೆ)

ವೈವಾಹಿಕ ಸ್ಥಿತಿ

ಈ ನೇಮಕಾತಿಗೆ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರು.
ತರಬೇತಿಯ ಅವಧಿಯಲ್ಲಿ ಮದುವೆಗೆ ಅವಕಾಶ ಇಲ್ಲ. ಅರ್ಜಿ ಸಲ್ಲಿಸಿದ ನಂತರ ಮದುವೆ ಮಾಡಿಕೊಂಡರೆ, ಆಯ್ಕೆ ಆದರೂ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ.

ದೈಹಿಕ ಅರ್ಹತೆ / ಫಿಟ್ನೆಸ್ ಮಾನದಂಡ

ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಬೇಕಾದರೆ ಫಿಟ್ನೆಸ್ ಅತ್ಯಂತ ಮುಖ್ಯ. ಈ ಕೋರ್ಸ್‌ನ ನಿರೀಕ್ಷಿತ ದೈಹಿಕ ಮಾನದಂಡಗಳು ಹೀಗಿವೆ:

  • 2.4 ಕಿಮೀ ಓಟ: 10 ನಿಮಿಷ 30 ಸೆಕೆಂಡ್ ಒಳಗೆ
  • ಪುಷ್ ಅಪ್ಸ್: 40
  • ಪುಲ್ ಅಪ್ಸ್: 6
  • ಸಿಟ್ ಅಪ್ಸ್: 30
  • ಸ್ಕ್ವಾಟ್ಸ್: 30 repetitions ಇರುವ 2 ಸೆಟ್
  • ಲಂಗ್ಸ್: 10 repetitions ಇರುವ 2 ಸೆಟ್
  • ಈಜು: ಮೂಲಭೂತ ಈಜು ತಿಳಿದಿರಬೇಕು

ಇವು selection ನಂತರ ತರಬೇತಿಯಲ್ಲಿ ತುಂಬಾ ಸಹಾಯ ಮಾಡುತ್ತವೆ. ಆದ್ದರಿಂದ ಅಭ್ಯರ್ಥಿಗಳು ಈಗಿನಿಂದಲೇ ಅಭ್ಯಾಸ ಆರಂಭಿಸುವುದು ಉತ್ತಮ.

ವೇತನ ಮತ್ತು ಭತ್ಯೆಗಳ ಮಾಹಿತಿ

ತರಬೇತಿ ಅವಧಿಯಲ್ಲಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲೇ ₹56,100 ಪ್ರತಿ ತಿಂಗಳು ಸ್ಟೈಪೆಂಡ್ ನೀಡಲಾಗುತ್ತದೆ. ಇದು pay matrix Level-10 ಪ್ರಾರಂಭಿಕ ವೇತನವಾಗಿದೆ.

Commission ನಂತರ (Rank-wise Pay)

Lieutenant ಆಗಿ commission ಆದ ನಂತರ ವೇತನ ಶ್ರೇಣಿ:

  • Lieutenant: ₹56,100 ರಿಂದ ₹1,77,500
  • Captain: ₹61,300 ರಿಂದ ₹1,93,900
  • Major: ₹69,400 ರಿಂದ ₹2,07,200
  • Lieutenant Colonel ಮತ್ತು ಮೇಲಿನ ಹುದ್ದೆಗಳಿಗೆ ಇನ್ನೂ ಹೆಚ್ಚು

ಹೆಚ್ಚುವರಿ ಭತ್ಯೆಗಳು

ಸೇನೆಯಲ್ಲಿ ಮೂಲ ವೇತನದ ಜೊತೆಗೆ ಹಲವು ಭತ್ಯೆಗಳು ಇರುತ್ತವೆ:

  • Military Service Pay ₹15,500 ಪ್ರತಿ ತಿಂಗಳು
  • Technical Allowance (Tier-I/Tier-II)
  • Transport Allowance
  • Dress Allowance ವರ್ಷಕ್ಕೆ ₹20,000
  • Ration in kind (ಸೇವೆಯಲ್ಲಿ ಸಿಗುತ್ತದೆ)
  • Field area allowance (ಹುದ್ದೆ ಮತ್ತು ಪ್ರದೇಶದ ಪ್ರಕಾರ)
  • AGIF insurance cover ₹1.25 ಕೋಟಿ

ವಯೋಮಿತಿ (01 ಅಕ್ಟೋಬರ್ 2026ಕ್ಕೆ ಅನ್ವಯ)

  • ಕನಿಷ್ಟ ವಯಸ್ಸು: 20 ವರ್ಷ
  • ಗರಿಷ್ಠ ವಯಸ್ಸು: 27 ವರ್ಷ
  • ಜನನ ದಿನಾಂಕ: 01 ಅಕ್ಟೋಬರ್ 1999 ರಿಂದ 30 ಸೆಪ್ಟೆಂಬರ್ 2006ರ ನಡುವೆ ಜನಿಸಿದವರು ಅರ್ಹರು

ವಯಸ್ಸಿನ ಪುರಾವೆಗೆ 10ನೇ ತರಗತಿ ಪ್ರಮಾಣಪತ್ರದಲ್ಲಿರುವ DOB ಮಾತ್ರ ಅಂಗೀಕಾರ.

ಮುಖ್ಯ ದಿನಾಂಕಗಳು

  • ಅರ್ಜಿ ಆರಂಭ: 07 ಜನವರಿ 2026 (1500 ಗಂಟೆ)
  • ಅರ್ಜಿ ಕೊನೆ: 05 ಫೆಬ್ರವರಿ 2026 (1500 ಗಂಟೆ)
  • Cut-off ಪ್ರಕಟ: ಮಾರ್ಚ್ 2026 ಮೊದಲ ವಾರ
  • SSB ದಿನಾಂಕ ಆಯ್ಕೆ ಅವಕಾಶ: ಮಾರ್ಚ್ 2026 ಎರಡು ವಾರ
  • SSB ಸಂದರ್ಶನ: ಏಪ್ರಿಲ್ ರಿಂದ ಜೂನ್ 2026
  • ತರಬೇತಿ ಆರಂಭ: ಅಕ್ಟೋಬರ್ 2026
  • ತರಬೇತಿ ಮುಕ್ತಾಯ: ಸೆಪ್ಟೆಂಬರ್ 2027

ಅರ್ಜಿ ಶುಲ್ಕ

ಈ ನೇಮಕಾತಿಗೆ ಅರ್ಜಿ ಶುಲ್ಕ (Application Fee) ಕುರಿತು ಅಧಿಕೃತ ಅಧಿಸೂಚನೆಯಲ್ಲಿ ಯಾವುದೇ ಶುಲ್ಕವನ್ನು ಉಲ್ಲೇಖಿಸಲಾಗಿಲ್ಲ. ಆದ್ದರಿಂದ ಅಭ್ಯರ್ಥಿಗಳು ಯಾವುದೇ ಫೀಸ್ ಪಾವತಿಸದೇ ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡಿ, ಅಲ್ಲಿ ನೀಡಿರುವ ನಿಯಮಗಳನ್ನು ಓದಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿದರೆ ಅರ್ಜಿ ರದ್ದಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಅರ್ಜಿ ಭರ್ತಿ ಮಾಡುವುದು ಅಗತ್ಯ.

ಆಯ್ಕೆ ಪ್ರಕ್ರಿಯೆ (Selection Process)

ಈ ನೇಮಕಾತಿಯಲ್ಲಿ ಆಯ್ಕೆ ಹಂತ ಹಂತವಾಗಿ ನಡೆಯುತ್ತದೆ:

ಹಂತ 1: ಆನ್‌ಲೈನ್ ಅರ್ಜಿ ಸಲ್ಲಿಕೆ
joinindianarmy.nic.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.

ಹಂತ 2: ಶಾರ್ಟ್‌ಲಿಸ್ಟಿಂಗ್
ಅಭ್ಯರ್ಥಿಗಳನ್ನು ಅವರ cumulative percentage ಆಧರಿಸಿ stream-wise shortlist ಮಾಡಲಾಗುತ್ತದೆ. Vacancies ಆಧರಿಸಿ cut-off ಇರುತ್ತದೆ.

ಹಂತ 3: SSB Centre allotment
Shortlist ಆದವರಿಗೆ email ಮೂಲಕ ಕೇಂದ್ರ ಮಾಹಿತಿ ನೀಡಲಾಗುತ್ತದೆ. Candidates ಮೊದಲ ಬರುವವರಿಗೆ ಮೊದಲ ಆದ್ಯತೆ ಎಂಬ ರೀತಿಯಲ್ಲಿ SSB date ಆಯ್ಕೆ ಮಾಡಬಹುದು.

ಹಂತ 4: SSB ಸಂದರ್ಶನ
SSB ಎರಡು ಹಂತಗಳಲ್ಲಿ ನಡೆಯುತ್ತದೆ ಮತ್ತು ಗರಿಷ್ಠ 5 ದಿನಗಳ ಕಾಲ ಇರಬಹುದು.
SSB ಕೇಂದ್ರಗಳು: Prayagraj, Bhopal, Bengaluru, Jalandhar.

ಹಂತ 5: ವೈದ್ಯಕೀಯ ಪರೀಕ್ಷೆ
SSB recommended ಆದ ಅಭ್ಯರ್ಥಿಗಳಿಗೆ medical test ನಡೆಯುತ್ತದೆ. Medical validity 270 days.

ಹಂತ 6: Merit list
SSB marks ಆಧರಿಸಿ stream-wise merit list ತಯಾರಿಸಲಾಗುತ್ತದೆ.

ಹಂತ 7: Joining letter
Merit list ಒಳಗೆ ಬರುವ ಮತ್ತು medical fit ಅಭ್ಯರ್ಥಿಗಳಿಗೆ joining letter ನೀಡಲಾಗುತ್ತದೆ.

ಇಲ್ಲಿ ಗಮನಿಸಬೇಕಾದ್ದು: SSB qualify ಆದ ಮಾತ್ರಕ್ಕೆ final selection ಖಚಿತ ಅಲ್ಲ. Merit + vacancies + medical ಮೂರು ಮುಖ್ಯ.

ಅರ್ಜಿ ಸಲ್ಲಿಸುವ ವಿಧಾನ (Step-by-step)

  1. joinindianarmy.nic.in ಓಪನ್ ಮಾಡಿ
  2. Officer Entry Apply/Login ಕ್ಲಿಕ್ ಮಾಡಿ
  3. ಹೊಸವರು Registration ಮಾಡಿ
  4. Dashboard → Apply Online ಕ್ಲಿಕ್
  5. Technical Graduate Course ಎದುರು Apply ಕ್ಲಿಕ್
  6. Personal/Communication/Education details ತುಂಬಿ
  7. Save & Continue ಮಾಡಿ ಮುಂದಕ್ಕೆ ಹೋಗಿ
  8. Summary page ನಲ್ಲಿ ಎಲ್ಲ ವಿವರ ಪರಿಶೀಲಿಸಿ
  9. Submit ಮಾಡಿ
  10. ಅರ್ಜಿ ಮುಚ್ಚಿದ ನಂತರ 30 ನಿಮಿಷ ಕಳೆದ ಮೇಲೆ Application Print ತೆಗೆದುಕೊಳ್ಳಿ (2 ಪ್ರತಿಗಳು)

SSB ಸಂದರ್ಶನಕ್ಕೆ ಬೇಕಾದ ದಾಖಲೆಗಳು

SSB ಸಮಯದಲ್ಲಿ ಕೆಳಗಿನ ದಾಖಲೆಗಳನ್ನು ಜೊತೆಯಲ್ಲಿ ತರುವುದನ್ನು ಮರೆತರೆ ಸಮಸ್ಯೆ ಆಗಬಹುದು:

  • Online application printout (signed + photo)
  • 10ನೇ ಮತ್ತು 12ನೇ ತರಗತಿ ಪ್ರಮಾಣಪತ್ರ ಹಾಗೂ marksheet
  • Engineering degree/provisional degree
  • ಎಲ್ಲಾ semester marksheets
  • CGPA conversion certificate (ಅಗತ್ಯವಿದ್ದರೆ)
  • Final year candidates ಗೆ principal certificate ಮತ್ತು declaration
  • Civil verification documents

ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು. Digilocker certificates ಅಂಗೀಕಾರವಿಲ್ಲ ಎಂದು ಸೂಚಿಸಲಾಗಿದೆ.

ಕೊನೆಯ ಮಾತು

Indian Army SSC Tech Men 2026 ನೇಮಕಾತಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮತ್ತು ಪದವಿಧರರಿಗೆ ಬಹಳ ದೊಡ್ಡ ಅವಕಾಶ. ಉತ್ತಮ ವೇತನ, ಗೌರವಯುತ ಸೇವೆ, ದೇಶಸೇವೆಯ ಹೆಮ್ಮೆ ಮತ್ತು career growth ಇವೆಲ್ಲವನ್ನು ಒಟ್ಟಿಗೆ ನೀಡುವ entry ಇದು. ಆದ್ದರಿಂದ ಅರ್ಹತೆ ಇರುವ ಅಭ್ಯರ್ಥಿಗಳು ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸುವುದು ಒಳ್ಳೆಯದು.

Leave a Comment